ಇತ್ತೀಚೆಗೆ ಬೆಂಗಳೂರಿನ ಸಾಧಿಕ್ ನಗರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಾಗ ಅಲ್ಲಿಗೆ ಯಾರನ್ನು ಕೇಳಿ ಅವರು ಹೋಗಿದ್ರು? ಎಂದು ಪ್ರಶ್ನಿಸಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, ಇದೀಗ ಪಾದರಾಯನಪುರದ ಘಟನೆಯಲ್ಲೂ ಅದೇ ರಾಗ ಹಾಡಿದ್ದಾರೆ.
ಬೆಂಗಳೂರು, (ಏ.20): ಇತ್ತೀಚೆಗೆ ಬೆಂಗಳೂರಿನ ಸಾಧಿಕ್ ನಗರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಾಗ ಅಲ್ಲಿಗೆ ಯಾರನ್ನು ಕೇಳಿ ಅವರು ಹೋಗಿದ್ರು? ಎಂದು ಪ್ರಶ್ನಿಸಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, ಇದೀಗ ಪಾದರಾಯನಪುರದ ಘಟನೆಯಲ್ಲೂ ಅದೇ ರಾಗ ಹಾಡಿದ್ದಾರೆ.
ಪಾದರಾಯನಪುರ ಗಲಾಟೆ ನಡೆಯುತ್ತಿದ್ಧಾಗ ಶಾಸಕ ಜಮೀರ್ ಖಾನ್ ಎಲ್ಲಿದ್ರು?
ಕೊರೋನಾ ವಾರಿಯರ್ಸ್ ಮೇಲೆ ನಿನ್ನೆ ಪಾದರಾಯನಪುರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, ಹಗಲು ಹೋಗಿದ್ದರೆ ಹೀಗೆ ಆಗ್ತಾ ಇರಲಿಲ್ಲ, ರಾತ್ರಿ ಹೋಗಿದ್ದಕ್ಕೇ ಹೀಗೆ ಆಗಿರೋದು ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆಯೇ ಉತ್ತರ ಕೊಡಲಾಗದೇ ಅಲ್ಲಿಂದ ಪಲಾಯನ ಮಾಡಿದರು.