ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿರುದ್ಧ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಹೋಂ ಮಿನಿಸ್ಟರ್ ಆಗೋದಕ್ಕೆ ಲಾಯಕ್ಕೇನ್ರಿ ನೀವು.? ಎಂದು ಪ್ರಶ್ನಿಸಿದ್ದಾರೆ. ನಿಮಗೆ ಅನುಭವವೇ ಇಲ್ಲ. ಗೃಹ ಇಲಾಖೆ ಹ್ಯಾಂಡಲ್ ಮಾಡೋಕೆ ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ. 06): ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿರುದ್ಧ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಹೋಂ ಮಿನಿಸ್ಟರ್ ಆಗೋದಕ್ಕೆ ಲಾಯಕ್ಕೇನ್ರಿ ನೀವು.? ಎಂದು ಪ್ರಶ್ನಿಸಿದ್ದಾರೆ. ನಿಮಗೆ ಅನುಭವವೇ ಇಲ್ಲ. ಗೃಹ ಇಲಾಖೆ ಹ್ಯಾಂಡಲ್ ಮಾಡೋಕೆ ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ತಮ್ಮ ಬೈಕ್‌ಗೆ ಬೈಕ್ ಟಚ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಭಕ್ಷಿಗಾರ್ಡನ್ ಸಮೀಪದ ಜೈ ಮಾರುತಿ ನಗರದ ನಿವಾಸಿ ಚಂದ್ರು ಎಂಬ ಯುವಕನೊಬ್ಬನನ್ನು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಹತ್ಯೆಗೆ ಕನ್ನಡ- ಉರ್ದು ಗಲಾಟೆಯೇ ಕಾರಣ ಎನ್ನಲಾಗುತ್ತಿದೆ. ಗೃಹಸಚಿವರೂ ಹೀಗೆ ಹೇಳಿಕೆ ಕೊಟ್ಟಿದ್ದರು. ಕೊನೆಗೆ ಹೇಳಿಕೆಯನ್ನು ಬದಲಾಯಿಸಿದರು. ಈ ರೀತಿ ಗೃಹ ಸಚಿವರೇ ಹೇಳಿಕೆ ಕೊಡುವುದಕ್ಕೆ ಸಿದ್ದು ಗುದ್ದು ಕೊಟ್ಟಿದ್ದಾರೆ.