ಲ್ಯಾಪ್‌ ಟಾಪ್ ಖರೀದಿಸಲು ಪೋಷಕರು ಸಾಲದ ಮೊರೆ..!

Jul 8, 2020, 2:40 PM IST

ಬೆಂಗಳೂರು(ಜು.08): ಕೊರೋನಾ ಭೀತಿಯಿಂದಾಗಿ ಶಾಲಾ ಕಾಲೇಜುಗಳ ಆರಂಭ ತಡವಾಗಿದೆ. ಹೀಗಿರುವಾಗಲೇ ಆನ್‌ಲೈನ್ ಶಿಕ್ಷಣ ನೀಡುವ ವಿಚಾರವಾಗಿ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ. 

ಮಂಗಳವಾರವಷ್ಟೇ ತಜ್ಞರ ಸಮಿತಿ, ನಿಬಂಧನೆಗಳಿಗೊಳಪಟ್ಟು ಆನ್‌ಲೈನ್ ತರಗತಿಗಳ ಆಯೋಜನೆಗೆ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಸ್ಮಾರ್ಟ್‌ಫೋನ್, ಟ್ಯಾಬ್ಲೇಟ್ಸ್ ಹಾಗೂ ಲ್ಯಾಪ್‌ ಟಾಪ್ ಖರೀದಿಸಲು ಪೋಷಕರು ಮುಂದಾಗಿದ್ದಾರೆ.

ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?

ಹೌದು, ಆನ್‌ಲೈನ್ ತರಗತಿಗೆ ಮೂಲಭೂತವಾಗಿ ಬೇಕಾಗುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಖರೀದಿಸಲು ಪೋಷಕರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.