New Year 2022 : ಬ್ರಿಗೇಡ್‌ ರೋಡ್‌ನಲ್ಲಿ ಸೆಲಬ್ರೇಶನ್‌ಗೆ ಅವಕಾಶವಿಲ್ಲ

Dec 16, 2021, 12:52 PM IST

ಬೆಂಗಳೂರು (ಡಿ. 16): ರಾಜ್ಯದಲ್ಲಿ ಒಮಿಕ್ರೋನ್ ಭೀತಿ (Omicron Threat) ಹೆಚ್ಚಾಗಿದೆ. ಮೈಮರೆತರೆ 3 ನೇ ಅಲೆಗೆ ಆಹ್ವಾನ ನೀಡಿದಂತಾಗುವುದು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ವರ್ಷಾಚರಣೆ (New Year Celebration 2022) ಕ್ರಿಸ್‌ಮಸ್‌ಗೆ (Chritsmas) ನಿರ್ಬಂಧ ವಿಧಿಸಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

Omicron Threat: ಹೊಸವರ್ಷ, ಕ್ರಿಸ್ಮಸ್ ಸೆಲಬ್ರೇಶನ್‌ಗೆ ನಿರ್ಬಂಧ ವಿಧಿಸಲು ತಾಂತ್ರಿಕ ಸಲಹಾ ಸಮಿತಿ ಶಿಫಾರಸು

ಡಿಸಂಬರ್ 22 ರಿಂದ ಜನವರಿ 2 ರವರೆಗೆ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಹೇಳಿದೆ. ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೆಂಗಳೂರು ನಗರದ ಮಟ್ಟಿಗೆ ಬಿಬಿಎಂಪಿ (BBMP) ಟಫ್‌ರೂಲ್ಸ್ ಜಾರಿಗೆ ತರುವ ಸಾಧ್ಯತೆ ಇದೆ.  ಈ ಬಾರಿ ಬ್ರಿಗೇಡ್‌ ರೋಡ್ (Brigade Road) ಹೊಸವರ್ಷಾಚರಣೆಗೆ ಬ್ರಿಗೇಡ್ ರೋಡ್ ಅಸೋಸಿಯೇಶನ್ ಬ್ರೇಕ್ ಹಾಕಿದೆ. ಸರ್ಕಾರ ಅನುಮತಿ ಕೊಟ್ಟರೂ ಆಚರಣೆ ಇಲ್ಲ ಎಂದಿದೆ.