ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಚನೆಯಂತೆ ಎಚ್ ವಿಶ್ವನಾಥ್, ಎಸ್, ಆರ್ ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಅರವಿಂದ್ ಬೆಲ್ಲದ್‌ಗೆ ನೊಟೀಸ್ ನೀಡಲಾಗಿದೆ. ಸರ್ಕಾರದ ವಿರುದ್ಧ, ನಾಯಕತ್ವದ ವಿರುದ್ಧ ಹೇಳಿಕೆ ನೀಡದಂತೆ ಎಚ್ಚರಿಸಲಾಗಿದೆ.
ಬೆಂಗಳೂರು (ಜೂ. 18): ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಚನೆಯಂತೆ ಎಚ್ ವಿಶ್ವನಾಥ್, ಎಸ್, ಆರ್ ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಅರವಿಂದ್ ಬೆಲ್ಲದ್‌ಗೆ ನೊಟೀಸ್ ನೀಡಲಾಗಿದೆ. ಸರ್ಕಾರದ ವಿರುದ್ಧ, ನಾಯಕತ್ವದ ವಿರುದ್ಧ ಹೇಳಿಕೆ ನೀಡದಂತೆ ಎಚ್ಚರಿಸಲಾಗಿದೆ.
ಇನ್ನೊಂದು ಕಡೆ ಪಕ್ಷದ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ್ ಬೆಲ್ಲದ ಅವರ ಭೇಟಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಅವಕಾಶ ನೀಡದೆ ಬಿಸಿ ಮುಟ್ಟಿಸಿದ್ದಾರೆ.