ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ, ಆದರೂ 81 ಮಂದಿಗೆ ತಗುಲಿದೆ ಕೊರೋನಾ ಸೋಂಕು..!

May 12, 2020, 2:12 PM IST

ಬೆಂಗಳೂರು(ಮೇ.12): ಕೊರೋನಾ ಎನ್ನುವ ಮದ್ದಿಲ್ಲದ ಮಹಾಮಾರಿ ರಾಜ್ಯದ ಜನತೆಯನ್ನು ಕನಸಿನಲ್ಲೂ ಕಾಡಲಾರಂಭಿಸಿದೆ. ಕೊರೋನಾದ ಮೂಲ ಯಾವುದು ಎಂದು ಸರ್ಕಾರದಿಂದ ಹಿಡಿದು ವೈದ್ಯರವರೆಗೂ ತಲೆಕೆಡಿಸಿಕೊಂಡಿದ್ದಾರೆ.

ಇಡೀ ರಾಜ್ಯಕ್ಕೆ SARI ಮತ್ತು ILI ಪ್ರಕರಣಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ 862 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 81 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಹೇಗೆ ಎನ್ನುವುದು ಚಿದಂಬರ ರಹಸ್ಯವಾಗಿ ಉಳಿದಿದೆ.

ಕರ್ನಾಟಕಕ್ಕೆ ಡಬಲ್ ಶಾಕ್: 2 ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು..!

ಈ 81 ಮಂದಿಗೆ ಟ್ರಾವೆಲ್ ಹಿಸ್ಟರಿ ಇಲ್ಲ, ಯಾವ ಪ್ರೈಮರಿ ಸಂಪರ್ಕವೂ ಇಲ್ಲ. ಹೀಗಿದ್ದೂ ವೈರಸ್ ಹೇಗೆ ತಗುಲಿದೆ ಎನ್ನುವುದು ಮಾತ್ರ ಪತ್ತೆಯಾಗಿಲ್ಲ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.