May 26, 2020, 12:08 PM IST
ಬೆಂಗಳೂರು(ಮೇ.25): ನಗರದ BMTC ಬಸ್ ನಿಲ್ದಾಣದಲ್ಲಿ ಜನವೋ ಜನ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬಸ್ ಹತ್ತಲು ಜನ ಮುಂದಾಗಿರುವ ದೃಶ್ಯಗಳು ಸರ್ವೇ ಸಾಮಾನ್ಯ ಎನಿಸಿದೆ.
ಬೆಳಗ್ಗೆ ಎಂಟು ಗಂಟೆಯಾದರೂ ಅತ್ತಿಬೆಲೆ, ಆಡುಗೋಡಿ, ಕೋರಮಂಗಲ ಕಡೆ ಹೋಗುವ ಪ್ರಯಾಣಿಕರು ಬಸ್‌ಗಾಗಿ ಕಾದುಕುಳಿತ್ತಿದ್ದರು. ಬಸ್‌ಗಳು ಬರುತ್ತಿದ್ದಂತೆ ನಾ ಮುಂದು-ತಾ ಮುಂದು ಎಂದು ಬಸ್ ಏರಿದ್ದಾರೆ.
ಬಳ್ಳಾರಿ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಪಾಸಿಟಿವ್..!
BMTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಾ ಇದ್ದಾರೆ. ಆದರೆ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.