ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್..!

Jun 12, 2020, 4:15 PM IST

ಬೆಂಗಳೂರು (ಜೂ. 12): ಸಾಮಾಜಿಕ ಅಂತರದ ಕಾಯ್ದುಕೊಳ್ಳಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ನಮ್ಮ ಜನ ಮಾತ್ರ ಕೇಳುತ್ತಲೇ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಮಾಯವಾಗಿದೆ. 

ಮಂಗಳೂರಿನ ಗುರುಪುರದಲ್ಲಿ ಪಲ್ಗುಣಿ ನದಿಗೆ ನೂತನವಾಗಿ ಕಟ್ಟಲಾಗಿದ್ದ ಸೇತುವೆ ಉದ್ಘಾಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.  ದ.ಕ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಶಾಸಕರು  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೋನಾ ಎಂಟ್ರಿ..!

ಸಾಮಾಜಿಕ ಅಂತರ ಪಾಲಿಸಿ ಅಂತ ನಳಿನ್ ಕುಮಾರ್ ಸೂಚಿಸಿದ್ರೂ ಕಾರ್ಯಕರ್ತರು  ಡೋಂಟ್ ಕೇರ್ ಎಂದಿದ್ದಾರೆ. ಕಾರ್ಯಕರ್ತರ‌ ಮಧ್ಯದಿಂದ ನಳಿನ್ ಕುಮಾರ್ ತಪ್ಪಿಸಿಕೊಂಡರೂ ಮತ್ತೆ ಮತ್ತೆ‌ ಮುತ್ತಿಕೊಂಡಿದ್ದಾರೆ.