Jul 8, 2020, 10:35 AM IST
ಬೆಂಗಳೂರು (ಜು. 08): ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಮೈ ಮರೆತರೆ ಕೊರೊನಾ ಅಟ್ಯಾಕ್ ಮಾಡಬಹುದು..! ಏನಪ್ಪಾ ಇದು? ಆಸ್ಪತ್ರೆಗಳಲ್ಲಿ ಇದೆಂಥಾ ವ್ಯವಸ್ಥೆ ಅಂತೀರಾ? ಹೌದು. ಆಸ್ಪತ್ರೆಗಳಲ್ಲೇ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೊನಾ ಟೆಸ್ಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ನಿಂತರೂ ವೈದ್ಯರು ಅವರ ಟೆಸ್ಟ್ ಮಾಡುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಜನ ಒಬ್ಬರ ಮೈಮೇಲೆ ಒಬ್ಬರು ಬೀಳುವ ಹಾಗೆ ಕ್ಯೂ ನಿಂತಿದ್ದಾರೆ. ಇಲ್ಲೇ ಅಪಾಯ ಕಂಡು ಬರುತ್ತಿದೆ. ವಿಡಿಯೋ ಮಾಡಿ ಹೋಂ ಗಾರ್ಡ್‌ವೊಬ್ಬರು ನೋವು ತೋಡಿಕೊಂಡಿದ್ದಾರೆ.
ದೂರುಗಳ ನಡುವೆ ವಿಕ್ಟೋರಿಯಾಕ್ಕೆ ಸಚಿವ ಸುಧಾಕರ್, ಹೇಳಿದ್ದು ಒಂದೇ ಮಾತು