Apr 27, 2020, 6:09 PM IST
ನವದೆಹಲಿ(ಏ.27): ಕೊರೋನಾ ಹಾಟ್‌ಸ್ಪಾಟ್ ಎನಿಸಿರುವ ರೆಡ್ ಝೋನ್‌ಗಳಲ್ಲಿ ಲಾಕ್‌ಡೌನ್ ಮೇ 15ರವರೆಗೆ ಮುಂದುವರೆಯುತ್ತಾ ಎನ್ನುವ ಸಂಶಯ ದಟ್ಟವಾಗಲಾರಂಭಿಸಿದೆ. ಇನ್ನು ಆರೆಂಜ್ ಹಾಗೂ ಗ್ರೀನ್ ಝೋನ್‌ಗಳಲ್ಲಿ ಲಾಕ್‌ಡೌನ್ ಮತ್ತಷ್ಟು ಸಡಿಲಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೀಗೆಲ್ಲಾ ಗುಸುಗುಸು ಆರಂಭವಾಗಲು ಕಾರಣ ಸೋಮವಾರವಾದ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ, ಸಲಹೆಗಳಿಗೆ ಕಿವಿಯಾದರು. ಈಗಾಗಲೇ ದೇಶದಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ.
ರೆಡ್ ಝೋನ್ ಕಂಪ್ಲೀಟ್ ಲಾಕ್‌ಡೌನ್, ಆರೆಂಜ್ ಝೋನ್ ಅಲ್ಪ ಸಡಿಲಿಕೆ ಹಾಗೂ ಗ್ರೀನ್ ಝೋನ್‌ನಲ್ಲಿ ಜಾಸ್ತಿ ಸಡಿಲಿಕೆ ಮಾಡುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಮೇ.3ರ ಬಳಿಕವೂ ಕುಡುಕರಿಗೆ ಲಾಕ್‌ಡೌನ್, ಅಮೀರ್‌ಗೆ ಎಚ್ಚರಿಸಿದ್ದ ಕಿಂಗ್ ಖಾನ್; ಏ.27ರ ಟಾಪ್ 10 ಸುದ್ದಿ!
ಮೊದಲ ಹಂತದಲ್ಲಿ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದರು. ಇನ್ನು ಏಪ್ರಿಲ್ 14ರಿಂದ ಮೇ 03ರವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಮುಖ್ಯ ಮಂತ್ರಿಗಳ ಮಾತನ್ನು ಪ್ರಧಾನಿ ಆಲಿಸಿದರು. ಆರು ರಾಜ್ಯಗಳು ಲಾಕ್‌ಡೌನ್ ವಿಸ್ತರಿಸುವಂತೆ ಮನವಿ ಮಾಡಿಕೊಂಡಿವೆ. ಇನ್ನು ಕರ್ನಾಟಕ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್
ಇಲ್ಲಿದೆ ನೋಡಿ.