ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಸಚಿವ ಆನಂದ್ ಸಿಂಗ್ (Anand Singh) ಅವರು ಖಾಸಗಿ ಕಾರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
ಬೆಂಗಳೂರು (ಫೆ. 02): ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಸಚಿವ ಆನಂದ್ ಸಿಂಗ್ (Anand Singh) ಅವರು ಖಾಸಗಿ ಕಾರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
'ರಾಜಕೀಯ ಕಾರಣಕ್ಕೆ ನಾನು ಡಿಕೆಶಿ ಭೇಟಿ ಮಾಡಿಲ್ಲ. ನಮ್ಮಿಬ್ಬರ ಭೇಟಿ ಮುಗಿದ ವಿಚಾರ. ಬಿಎಸ್‌ವೈ ನನ್ನ ಮನವಿಗಳನ್ನೆಲ್ಲಾ ಈಡೇರಿಸಿದ್ದಾರೆ. ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಮಗಳನ್ನೂ ರಾಜಕೀಯಕ್ಕೆ ತರುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.