Aug 23, 2022, 5:14 PM IST
ಬೆಂಗಳೂರು (ಆ.23): ಎಸಿಬಿ ಪ್ರಶ್ನಿಸಿ ಸುಪ್ರೀ ಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿದೆ ಎನ್ನುವ ವಿಚಾರವಾಗಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದಿಂದ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಖಾಸಗಿ ವ್ಯಕ್ತಿ ಸಲ್ಲಿಸಿದ ಅರ್ಜಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಎಸಿಬಿ ರದ್ದು ಕುರಿತು ಹೈಕೋರ್ಟ್ ಆದೇಶವನ್ನೇ ಸರ್ಕಾರ ಪಾಲಿಸಲಿದೆ ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೊಮ್ಮಾಯಿ, ಎಸಿಬಿ ಕುರಿತಾಗಿ ಹೈಕೋರ್ಟ್ ನೀಡಿದ ಆದೇಶ ಹಾಗೂ ಪ್ರಣಾಳಿಕೆಯಲ್ಲಿ ನಾವು ಹೇಳಿದ ಅಂಶ ಎರಡೂ ಒಂದೇ. ಹಾಗಾಗಿ ಇದರ ಬಗ್ಗೆ ಮೇಲ್ಮನವಿ ಮಾಡುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ಆದೇಶವನ್ನು ಹೇಗೆ ಜಾರಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಖಾಸಗಿ ಅರ್ಜಿ
ಆದೇಶ ಬಂದ ಮೊದಲ ದಿನವೇ ಕ್ಯಾಬಿನೆಟ್ ಸಭೆ ಸೇರಿದ್ದೆವು. ಆಗಲೇ ಈ ಬಗ್ಗೆ ಮೇಲ್ಮನವಿ ಮಾಡಬಾರದು ಎಂದು ತೀರ್ಮಾನ ಮಾಡಿದ್ದೆವು. ಈಗ ಮೇಲ್ಮನವಿ ಸಲ್ಲಿಸಿರುವುದು ಯಾವುದೋ ಖಾಸಗಿ ವ್ಯಕ್ತಿ. ಆದರೆ, ಹೈಕೋರ್ಟ್ ಆದೇಶವನ್ನು ಸರ್ಕಾರ ಪಾಲನೆ ಮಾಡಲಿದೆ ಎಂದು ತಿಳಿಸಿದ್ದಾರೆ.