ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನಿನ್ನೆ ನಡೆಯಲೇ ಇಲ್ಲ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಕಾಣಿಸದೇ ಇದ್ದಿದ್ದು.
ಬೆಂಗಳೂರು (ಜ. 15): ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನಿನ್ನೆ ನಡೆಯಲೇ ಇಲ್ಲ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಕಾಣಿಸದೇ ಇದ್ದಿದ್ದು. ಇದು ಮಹಾ ವಿಪತ್ತಿನ ಮುನ್ಸೂಚನೆ. 2021 ಮತ್ತಷ್ಟು ಸಂಕಷ್ಟಗಳನ್ನು ತಂದಿಡಲಿದೆ. ಯುದ್ಧ ಸಂಭವಿಸಬಹುದು. ಸಾವು- ನೋವು ಸಂಭವಿಸಬಹುದು. ಮಹಾರುದ್ರಯಾಗದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತರು ಹೇಳಿದ್ಧಾರೆ.