Jun 25, 2020, 11:23 AM IST
ಬೆಂಗಳೂರು(ಜೂ.25): ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ಮಿತಿ ಮೀರುತ್ತಿದ್ದು, ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕು ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದರ ಬೆನ್ನಲ್ಲೇ ಇಂದು(ಜೂ.25) ನಡೆಯುವ ಸಚಿವ ಸಂಪುಟ ಸಭೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಕೊರೋನಾ ಆತಂಕದ ನಡುವೆಯೇ SSLC ಪರೀಕ್ಷೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲೇ ಕ್ಯಾಬಿನೇಟ್ ಸಭೆಯಲ್ಲಿ ಲಾಕ್‌ಡೌನ್ ಕುರಿತಂತೆ ಬಿಸಿಬಿಸಿ ಚರ್ಚೆ ಶುರುವಾಗಿದೆ. SSLC ಪರೀಕ್ಷೆ ಮುಗಿಯುವವರೆಗೂ ಲಾಕ್‌ಡೌನ್ ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಲಬುರಗಿ: ಬಾಲಕಿ ಮೇಲೆ ರೇಪ್ ಮಾಡಿದ್ದ ಕಾಮುಕನ ಬಿಡದ ಕೊರೋನಾ..!
ಲಾಕ್‌ಡೌನ್ ಮಾಡುವ ಬಗ್ಗೆ ಆಲೋಚನೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರೆ, ತಜ್ಞರ ವರದಿಯೇ ಅಂತಿಮ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಇನ್ನು ಗೃಹಸಚಿವ ಬಸವರಾಜ್ ಮುಖ್ಯಮಂತ್ರಿ ಬಿಎಸ್‌ವೈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.