May 11, 2021, 5:11 PM IST
ಬೆಂಗಳೂರು, (ಮೇ.11): ಕೊರೋನಾವನ್ನು ನಿಯಂತ್ರಿಸಲು ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸ್ವತಃ ಕೇಂದ್ರ ಸರ್ಕಾರವೇ ಸಾರಿ ಹೇಳುತ್ತಿದೆ.ಕೇಂದ್ರ ಸರ್ಕಾರ ದೇಶದ 14 ರಾಜ್ಯಗಳಿಗೆ ಕೋವ್ಯಾಕ್ಸಿನ್ ಕೊಟ್ಟಿದೆ. ಆದ್ರೆ, ಕರ್ನಾಟಕಕ್ಕೆ ಇಲ್ಲ.
ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಕಳವಳ
ಕೋವ್ಯಾಕ್ಸಿನ್ ಪೂರೈಕೆಗಾಗಿ ಬಯೋಟಿಕ್‌ಗೆ ಕೇಂದ್ರ ಕೊಟ್ಟಿರುವ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲ.ಲಸಿಕೆ ಬೇಡಿಕೆ ಇರುವಾಗಲೇ ರಾಜ್ಯಕ್ಕೆ ಆಘಾತವಾಗಿದೆ. ಆಕ್ಸಿಜನ್ ವಿಚಾರದಲ್ಲೂ ಕೇಂದ್ರ ಸರ್ಕಾರ ಮಲತಾಯಿಧೋರಣೆ ಮಾಡಿತ್ತು. ಇದೀಗ ಲಸಿಕೆ ವಿಚಾರದಲ್ಲೂ ಅದೇ ಮಾಡುತ್ತಿದೆ. ಇನ್ನು ಈ ಬಗ್ಗೆ ಮಂಡ್ಯ ಸಂಸದ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.