- ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಯಥಾಸ್ಥಿತಿ ಮುಂದುವರಿಕೆ
- ಜನರು ಸಹಕರಿಸಿ ಸೋಂಕು ತಗ್ಗಿದರೆ ಲಾಕ್‌ಡೌನ್ ಮುಂದುವರೆಸುವುದಿಲ್ಲ: ಬಿಎಸ್‌ವೈ
- 'ಪಾಸಿಟಿವಿಟಿ ದರ ಶೇ. 10 ಕ್ಕಿಂತ ಕಡಿಮೆಯಾದಲ್ಲಿ ಸಡಿಲಿಕೆ ಸಾಧ್ಯತೆ
ಬೆಂಗಳೂರು (ಮೇ. 30): ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಯಥಾಸ್ಥಿತಿ ಮುಂದುವರೆಯುವುದು. ವಿಸ್ತರಣೆ ಮಾಡುವ ಬಗ್ಗೆ ಸಿಎಂ ಸಿಎಂ ನಿರ್ಧರಿಸುತ್ತಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
'ಪಾಸಿಟಿವಿಟಿ ದರ ಶೇ. 10 ಕ್ಕಿಂತ ಕಡಿಮೆಯಾದಲ್ಲಿ ಜೂನ್ 7 ರ ಬಳಿಕ ಒಂದಿಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಇನ್ನು ಸೋಂಕು ಪ್ರಮಾಣ ಇಳಿಕೆಯಾದಲ್ಲಿ ಲಾಕ್‌ಡೌನ್ ಮುಂದುವರೆಸುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.