ರಾಜ್ಯೋತ್ಸವ ಪ್ರಶಸ್ತಿ: ವಿವಾದ ಸೃಷ್ಟಿಸಿದೆ ನಿರುಪಮ ರಾಜೇಂದ್ರ ವಿಡಿಯೋ!

Oct 29, 2019, 12:53 PM IST

ಬೆಂಗಳೂರು (ಅ.29): ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆಗೊಂಡವರ ಪಟ್ಟಿ ಪ್ರಕಟವಾದ ಬೆನ್ನಲ್ಲೇ, ಆಯ್ಕೆ ಸಮಿತಿಯ ಮಹಿಳಾ ಸದಸ್ಯೆಯೊಬ್ಬರ ವಿಡಿಯೋ ಒಂದು ವಿವಾದಕ್ಕೆ ಕಾರಣವಾಗಿದೆ. 

ರಾಜೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸದಸ್ಯೆಯಾಗಿದ್ದ ನಿರುಪಮ ರಾಜೇಂದ್ರ, ರಾಜ್ಯೋತ್ಸವ ಪ್ರಶಸ್ತಿ ಪಡೆದವರೊಬ್ಬರನ್ನು ಉಲ್ಲೇಖಿಸಿ, ಶುಭಾಶಯ ರೆಕಾರ್ಡ್ ಮಾಡಿ, ನನ್ನಿಂದ ನಿಮಗೆ ಪ್ರಶಸ್ತಿ ಬಂದಿದೆ ಎನ್ನುವ ಅರ್ಥದಲ್ಲಿ ಅದನ್ನ ಬಿಂಬಿಸಿದ್ದಷ್ಟೇ ಅಲ್ಲ, ಪ್ರಶಸ್ತಿ ಆಯ್ಕೆಗೆ ಎಷ್ಟೊಂದು ಕಷ್ಟ ಪಡಬೇಕಾಯಿತು, ತಾನು ಎಷ್ಟು ಜನಕ್ಕೆ ಪ್ರಶಸ್ತಿ ಕೊಡುವುದರಲ್ಲಿ ಯಶಸ್ವಿ ಆದೆ ಎಂದೆಲ್ಲ ಬಣ್ಣಿಸಿಕೊಂಡಿದ್ದಾರೆ.

ಇದನ್ನೂ ಓದಿ | ವಿವಾದ ಎಬ್ಬಿಸಿದ ರಾಜ್ಯೋತ್ಸವ ಅವಾರ್ಡ್, ತಮ್ಮ ಒಡೆತನದ ಸಂಸ್ಥೆಗೆ ಪ್ರಶಸ್ತಿ?...

ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್‌ಗೆ ಪ್ರಶಸ್ತಿ ಕೊಡಿಸಿದ್ದು ನಾನೇ! ಪ್ರಶಸ್ತಿ ಕೊಡಿಸಲು ಎಷ್ಟೆಲ್ಲಾ ಕಷ್ಟ ಪಟ್ಟೆ ಅನ್ನೋದಾಗಿ ಹೇಳಿಕೊಂಡಿರೋ ನಿರುಪಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

29 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ 2019 ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.  ನವೆಂಬರ್ 1 ಕನ್ನಡ ರಾಜ್ಯೋತ್ಸವ ಸಂದರ್ಭ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: