ಲೋಕಸಭೆಯಲ್ಲಿ ಚರ್ಚೆಯಾದ ಕರ್ನಾಟಕದ 73 ಸಾವಿರ ಕೋಟಿ ಅನುದಾನ ಬಾಕಿ!

Feb 5, 2024, 10:52 PM IST

ಬೆಂಗಳೂರು (ಜ.5): ರಾಜ್ಯ ಸರ್ಕಾರದ ಅನುದಾನ ಸಮರದ ಆರೋಪ ಲೋಕಸಭೆಯಲ್ಲೂ ಸದ್ದು ಮಾಡಿದೆ. ಕರ್ನಾಟಕ ಅನುದಾನ ವಿಷಯವನ್ನು ಅಧೀರ್‌ ರಂಜನ್‌ ಚೌಧರಿ ಪ್ರಸ್ತಾಪ ಮಾಡಿದ್ದಾರೆ. ಅಧೀರ್ ರಂಜನ್ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲೇ ಉತ್ತರ ನೀಡಿದ್ದಾರೆ.

ಗ್ಯಾರಂಟಿಗೆ ಖರ್ಚು ಮಾಡಿ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅನುದಾನ ವಿಷಯದಲ್ಲಿ ನಾವು ರಾಜ್ಯಕ್ಕೆ ಅನ್ಯಾಯ ಮಾಡುವುದು ಸಾಧ್ಯವಿಲ್ಲ. ಹಣಕಾಸು ಆಯೋಗ ಹೇಳಿದ್ದಷ್ಟು ಅನುದಾನ ನೀಡೇ ನೀಡ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯಗಳಿಗೆ ಹಣ ಹಂಚಿಕೆ ನೇರ ತೆರಿಗೆ ವಿಚಾರದಲ್ಲಿ ಬರುತ್ತದೆ. ಹಣಕಾಸು ಆಯೋಗದ ವರದಿಯ ಮೇಲೆ ಇದರ ನಿರ್ಧಾರವಾಗುತ್ತದೆ. ಜಿಎಸ್ಟಿಯಲ್ಲಿ ಇರುವ ಎಸ್‌ಜಿಎಸ್‌ಟಿ ಸಂಪೂರ್ಣವಾಗಿ ರಾಜ್ಯಕ್ಕೆ ಹೋಗುತ್ತೆ ಎಂದು ನಿರ್ಮಲಾ ತಿಳಿಸಿದ್ದಾರೆ.

4 ವರ್ಷದಲ್ಲಿ ರಾಜ್ಯವನ್ನು ಜಾಗತಿಕ ಅನಿಮೇಷನ್‌ ಲೀಡರ್‌ ಮಾಡುವ ಗುರಿ: ಸಿದ್ದರಾಮಯ್ಯ

ಇದಕ್ಕೂ ಮುನ್ನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ,  ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳಿಗೆ ಭಾರೀ ಪ್ರಮಾಣದ ಬಾಕಿ ಉಳಿಸಿಕೊಳ್ಳಲಾಗಿದೆ.  ಇದಕ್ಕೆ ಪ್ರಸ್ತುತ ಕರ್ನಾಟಕವೇ ಉದಾಹರಣೆ. ನಿಮ್ಮ ತಾರತಮ್ಯ ನೀತಿ, ಆಡಳಿತ ಶಾಹಿ ವ್ಯವಸ್ಥೆ ವಿರುದ್ಧ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.