Night Curfew: ಅನಿವಾರ್ಯವೆಂದ ಸಿಎಂ, ಜನಹಿತಕ್ಕಾಗಿ ಈ ಕ್ರಮ ಎಂದ ಆರೋಗ್ಯ ಸಚಿವರು

Dec 27, 2021, 4:23 PM IST

ಬೆಂಗಳೂರು (ಡಿ. 27): ರಾಜ್ಯದಲ್ಲಿ ಕೊರೋನಾ ರೂಪಾಂತರ ತಳಿ ಒಮಿಕ್ರೋನ್‌(Omicron) ಪ್ರಕರಣ ಹರಡುವಿಕೆ ತಡೆಯಲು ರಾಜ್ಯಾದ್ಯಂತ ಡಿ. 28ರಿಂದ ಜನವರಿ 7 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ (Night Curfew) ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಹೊಸ ವರ್ಷಾಚರಣೆಗೆ (New Year 2022) ಪ್ರತ್ಯೇಕ ಮಾರ್ಗಸೂಚಿ, ಸಭೆ, ಸಮಾರಂಭಗಳಲ್ಲಿ ಜನರ ಸೇರುವಿಕೆಗೆ ಸಂಖ್ಯಾ ಮಿತಿ ಸೇರಿದಂತೆ ಹಲವು ನಿರ್ಬಂಧಗಳನ್ನು ರಾಜ್ಯ ಸರ್ಕಾರ ವಿಧಿಸಿದೆ.

New Year 2022: ಪಾಸ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ

ಸರ್ಕಾರದ ಈ ನಿಯಮಗಳಿಗೆ ಪಬ್, ಬಾರ್ ಮಾಲಿಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ನೈಟ್ ಕರ್ಫ್ಯೂ ಜಾರಿಗೊಳಿಸಿದ್ದೇವೆ. ಇದು ನಮಗೆ ಅನಿವಾರ್ಯ. ಸಾರ್ವಜನಿಕರು ಸಹಕರಿಸಬೇಕು' ಎಂದಿದ್ದಾರೆ. 

ಮೊದಲ ಹಂತದಲ್ಲಿ ರಾತ್ರಿ ಕರ್ಫ್ಯೂ ಹಾಗೂ ಸೀಮಿತ ದಿನಗಳಿಗೆ ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಶೇ.50 ರಷ್ಟುಸೀಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಸ್ಥಿತಿ ಪರಿಶೀಲಿಸಿ ಅಗತ್ಯವಾದರೆ ಹೆಚ್ಚುವರಿ ನಿರ್ಬಂಧ ಕ್ರಮಗಳನ್ನು ಮುಖ್ಯಮಂತ್ರಿಗಳು ಸೂಚಿಸಲಿದ್ದಾರೆ.