News Hour  ಹಲಾಲ್ ವಾರ್ ನಡುವೆ ಗಂಡಸ್ತನದ ಗಲಾಟೆ, "ಹಿಂದೂ ಎನ್ನುವ ಶಬ್ದವೇ ಅಪಾಯ" ಎಂದ ಸಾಹಿತಿ ಕುಂವೀ!

News Hour ಹಲಾಲ್ ವಾರ್ ನಡುವೆ ಗಂಡಸ್ತನದ ಗಲಾಟೆ, "ಹಿಂದೂ ಎನ್ನುವ ಶಬ್ದವೇ ಅಪಾಯ" ಎಂದ ಸಾಹಿತಿ ಕುಂವೀ!

Published : Mar 31, 2022, 11:16 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಗಂಡಸ್ತನದ ಸವಾಲನ್ ಹಾಕಿದ ಎಚ್ ಡಿಕೆ
ಜಿಲ್ಲೆಜಿಲ್ಲೆಗಳಲ್ಲೂ ಹಬ್ಬಿದ ಹಲಾಲ್ ವರ್ಸಸ್ ಜಟ್ಕಾ ಹೋರಾಟ
ಹಿಂದು ಸಂಘಟನೆಗಳ ಪರ ನಿಂತ ಪೇಜಾವರ ಶ್ರೀ
ಹಿಂದುಗಳ ಕುರಿತಾಗಿ ಕುಂ.ವೀರಭದ್ರಪ್ಪ ವಿವಾದಿತ ಹೇಳಿಕೆ
 

ಬೆಂಗಳೂರು (ಮಾ. 31): ರಾಜ್ಯದಲ್ಲಿ ವಿವಾದದ ರೂಪ ತಾಳಿರುವ ಹಲಾಲ್ (Halal) ಹಾಗೂ ವ್ಯಾಪಾರ ವಾರ್ (Trade) ವಿಚಾರದ ಬಗ್ಗೆ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಗುರುವಾರ ಕೆಂಡಾಮಂಡಲರಾದರು. ಮಾತನಾಡುವ ಭರದಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಗಂಡಸ್ತನ ಪ್ರಶ್ನೆ ಮಾಡಿದ್ದು ಸುದ್ದಿಯಾಗುತ್ತಿದ್ದಂತೆ ತಮ್ಮ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಇನ್ನೊಂದೆಡೆ ಹಲಾಲ್ ಹಾಗೂ ಜಟ್ಕಾ ಕುರಿತಾಗಿ ಕರಪತ್ರ ಹಂಚುವ ಅಭಿಯಾನ ಜಿಲ್ಲೆಜಿಲ್ಲೆಗಳಿಗೆ ಮುಟ್ಟಿದೆ. ಬೆಂಗಳೂರಿನ ಬಹುತೇಕ ಅಂಗಡಿಗಳಲ್ಲಿ ಹಲಾಲ್ ಬೋರ್ಡ್ ಗಳನ್ನು ತೆಗೆದುಹಾಕಲಾಗಿದೆ.  ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿ ಉಡುಪಿಯ ಪೇಜಾವರ ಶ್ರೀ ಗಳನ್ನು ಮುಸ್ಲಿಂ ವ್ಯಾಪಾರಿಗಳ ಗುಂಪು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ಪೇಜಾವರ ಶ್ರೀಗಳು, "ಸಾಮರಸ್ಯ ಅನ್ನೋದು ಎರಡೂ ಕಡೆಯಿಂದ ಬರಬೇಕು. ಯಾರಿಂದ ಸಮಸ್ಯೆ ಹುಟ್ಟಿದೆಯೋ ಅವರಿಂದಲೇ ಈ ಸಮಸ್ಯೆ ಬಗೆಹರಿಯಬೇಕು' ಎಂದು ಹೇಳಿದ್ದಾರೆ.
ಪೇಜಾವರ ಶ್ರೀಗಳು ಹಿಂದು ಸಂಘಟನೆಗಳ ಪರವಾಗಿ ನಿಂತ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. "ಯಾವುದು ಹಿಂದೂ ಸಮಾಜ, ಯಾವ ಸಮಾಜಕ್ಕೆ ನೋವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮಗಿರಿಯಲ್ಲಿ ಇಟ್ಟಿದ್ದೀರಲ್ಲ ಅಂಥಾ ಜನಕ್ಕೆ ನೋವಾಗಿರಬಹುದು' ಎಂದು ಹೇಳಿದ್ದಾರೆ.

News Hour: ಕಲಾಪದಲ್ಲೂ ಹಲಾಲ್ ಪ್ರತಿಧ್ವನಿ.. ಇಬ್ರಾಹಿಂ ಹೇಳಿದ ವಿಧಾನ!

ಈ ನಡುವೆ ಸಾಹಿತಿ ಕುಂ.ವೀರಭದ್ರಪ್ಪ ಹಿಂದುಗಳ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ವಿದ್ಯಮಾನದ ಬಗ್ಗೆ ಮಾತನಾಡುತ್ತಾ, "ದೇಶಕ್ಕೆ ಹಿಂದೂ ಎನ್ನುವ ಶಬ್ದದಿಂದಲೇ ಅಪಾಯವಿದೆ. ಹಿಂದುಗಳು ಬಹುಸಂಖ್ಯಾತರು ಎಂದು ಹೇಳೋದು ಸರಿಯಲ್ಲ. ನಾನು ಹಿಂದು ಅಲ್ಲ, ನಾನು ಭಾರತೀಯ, ಲಿಂಗಾಯತ ಬಸವಣ್ಣನ ಅನುಯಾಯಿ' ಎಂದು ಹೇಳಿದ್ದಾರೆ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more