News Hour ಹಿಜಾಬ್ ನಂತ್ರ ಈಗ ಭಗವದ್ಗೀತೆ ಕಿಚ್ಚು, ಕಾಶ್ಮೀರ ಫೈಲ್ಸ್ ಕಟ್ಟುಕಥೆಯಂತೆ!

News Hour ಹಿಜಾಬ್ ನಂತ್ರ ಈಗ ಭಗವದ್ಗೀತೆ ಕಿಚ್ಚು, ಕಾಶ್ಮೀರ ಫೈಲ್ಸ್ ಕಟ್ಟುಕಥೆಯಂತೆ!

Suvarna News   | Asianet News
Published : Mar 18, 2022, 11:39 PM IST

ಕರ್ನಾಟಕ ಶಾಲೆಗಳಲ್ಲಿ ಭಗವದ್ಗೀತೆ ಅಧ್ಯಯನ

ಬಜೆಟ್ ಅಧಿವೇಶನದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ವ್ಯಾಕ್ಸಿನ್ ವಾರ್

ಕಾಶ್ಮೀರ ಫೈಲ್ಸ್ ಕಟ್ಟುಕಥೆ ಎಂದು ಹೇಳಿದ ಕಾಂಗ್ರೆಸ್

ಬೆಂಗಳೂರು (ಮಾ.18): ಗುಜರಾತ್ (Gujrat) ಬಳಿಕ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆಯನ್ನು ಸೇರಿಸುವ ಬಗ್ಗೆ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ದಿ ಕಾಶ್ಮೀರ ಫೈಲ್ಸ್ (The Kashmir Files) ಹಾಗೂ ಹಿಜಾಬ್ (Hijab) ವಿಚಾರಗಳು ತಣ್ಣಗಾದ ಬೆನ್ನಲ್ಲಿಯೇ ರಾಜ್ಯದಲ್ಲಿ ಭಗವದ್ಗೀತೆ ವಿಚಾರ ಕಿಚ್ಚೆಬ್ಬಿಸಿದೆ.  ಶಾಲಾ ಪಠ್ಯಕ್ರಮದಲ್ಲಿ ಗುಜರಾತ್ ಮಾದರಿಯಂತೆ ಭಗವದ್ಗೀತೆಯನ್ನು(Bhagavad Gita) ಅಳವಳಡಿಸಬೇಕು ಎನ್ನುವ ಅಭಿಪ್ರಾಯಕ್ಕೆ ರಾಜ್ಯಾದ್ಯಂತ ನಾಯಕರಿಂದ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಕಿಚ್ಚು ಎಬ್ಬಿಸಿರುವ ಭಗವದ್ಗೀತೆ ವಿಚಾರ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಗುಜರಾತ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷವೂ ಇದಕ್ಕೆ ಬೆಂಬಲ ನೀಡಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದರ ಪರವಾಗಿ ನಿಲ್ಲಬೇಕು ಅನ್ನೋ ವಿಚಾರದಲ್ಲಿಯೇ ಗೊಂದಲದಲ್ಲಿದೆ.

News Hour: ಭಷ್ಟರ ಮೇಲೆ ಎಸಿಬಿ ದಾಳಿ, ಮುಗಿಯದ ಹಿಜಾಬ್ ಗೊಂದಲ
ಇನ್ನು ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಯುದ್ಧ ನಡೆಯಿತು. ಕೊರೋನಾವೈರಸ್ ಲಸಿಕೆಯ ವಿಚಾರವಾಗಿ ಆರಂಭವಾದ ಮಾತಿನ ಪ್ರಹಾರ, ಕೊನೆಗೆ ಎಲ್ಲೆಲ್ಲಿಗೋ ಹೋಗಿ ತಲುಪಿ, ವಿಧಾನಸಭೆಯಲ್ಲಿ ವಾಕ್ಸಮರಕ್ಕೆ ಕಾರಣವಾಯಿತು. ಮತ್ತೊಂದೆಡೆ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕನ್ನಡದಲ್ಲಿ ಸ್ವಂತ ಖರ್ಚಿನಲ್ಲಿ ಡಬ್ಬಿಂಗ್ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಆ ಮೂಲಕ ರಾಜ್ಯದಲ್ಲಿ ಕನ್ನಡಿಗರ ಪ್ರತಿ ಮನೆನೆಗೂ ಈ ಚಿತ್ರವನ್ನು ತಲುಪಿಸುವ ಕೆಲಸವನ್ನು ಮಾಡಲು ತಯಾರಿ ನಡೆಸಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more