Dec 27, 2021, 4:38 PM IST
ಬೆಂಗಳೂರು (ಡಿ. 27): ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಹೊಸ ವರ್ಷಾಚರಣೆ (New Year 2022) ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Panth) ತಿಳಿಸಿದ್ದಾರೆ.
Night Curfew: ಅನಿವಾರ್ಯವೆಂದ ಸಿಎಂ, ಜನಹಿತಕ್ಕಾಗಿ ಈ ಕ್ರಮ ಎಂದ ಆರೋಗ್ಯ ಸಚಿವರು
ಸರ್ಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಸರ್ಕಾರ ಆದೇಶದ ಪ್ರಕಾರ ಮುಂಗಡ ಬುಕ್ಕಿಂಗ್ ಇದ್ದವರು ಮಾತ್ರ ಹೋಟೆಲ್, ಪಬ್, ಕ್ಲಬ್‌ಗಳಿಗೆ ತೆರಳಬಹುದು. ಕಳೆದ ವರ್ಷದ ಮಾದರಿಯಲ್ಲೇ ಈ ವರ್ಷವೂ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ರಾತ್ರಿ ವೇಳೆ ಅನಾವಶ್ಯಕ ಸುತ್ತಾಟಕ್ಕೆ ಅವಕಾಶ ಇರುವುದಿಲ್ಲ. ಡಿ.31ರಂದು ಬ್ರಿಗೇಡ್ ರೋಡ್‌ನಲ್ಲಿ ಜನರು ಸೇರುವಂತಿಲ್ಲ ಎಂದಿದ್ದಾರೆ.
ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಸಂಚಾರಕ್ಕೆ ಅವಕಾಶ ಇರಲಿದೆ. ಆದರೆ, ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಪಂತ್ ಹೇಳಿದರು.