ಬ್ರಿಟನ್‌ನಿಂದ ಭಾರತಕ್ಕೆ ರಿಟರ್ನ್ ಆದವರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.
ಬೆಂಗಳೂರು (ಡಿ. 28): ಬ್ರಿಟನ್‌ನಿಂದ ಭಾರತಕ್ಕೆ ರಿಟರ್ನ್ ಆದವರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.
ಡಿ. 12 ರಿಂದ 21 ರವರೆಗೆ ಬ್ರಿಟನ್‌ನಿಂದ ರಾಜ್ಯಕ್ಕೆ 2127 ಮಂದಿ ವಾಪಸ್ಸಾಗಿದ್ದಾರೆ. ಬಾನುವಾರದವರೆಗೆ 1587 ಮಂದಿಯನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಉಳಿದ 540 ಮಂದಿ ಇನ್ನೂ ಪತ್ತೆಯಾಗಿಲ್ಲ. 26 ಮಂದಿಗೆ ಪಾಸಿಟಿವ್, 1264 ಮಂದಿಗೆ ನೆಗೆಟಿವ್ ಹಾಗೂ 297 ಮಂದಿಯ ವರದಿಗಾಗಿ ಕಾಯಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.