ಯುದ್ಧಪೀಡಿತ ಉಕ್ರೇನ್ನಲ್ಲಿ ಮೃತಪಟ್ಟಕನ್ನಡಿಗ, ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ವಾಪಸ್ ತರುವ ಪ್ರಯತ್ನದಲ್ಲಿ ಸರ್ಕಾರ ಕೊನೆಗೂ ಯಶಕಂಡಿದೆ.
ದಾವಣಗೆರೆ (ಮಾ. 19): ಯುದ್ಧಪೀಡಿತ ಉಕ್ರೇನ್ನಲ್ಲಿ ಮೃತಪಟ್ಟಕನ್ನಡಿಗ, ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ವಾಪಸ್ ತರುವ ಪ್ರಯತ್ನದಲ್ಲಿ ಸರ್ಕಾರ ಕೊನೆಗೂ ಯಶಕಂಡಿದೆ. ನವೀನ್ ಮೃತದೇಹ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಂತರ ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಉಕ್ರೇನ್ನಿಂದ ವಾಪಸ್ ಬರುತ್ತಿರುವ ನವೀನ್ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾವಣಗೆರೆಯ ಎಸ್.ಎಸ್.ಮೆಡಿಕಲ್ ಕಾಲೇಜಿಗೆ ನೀಡಲು ಕುಟುಂಬದವರು ನಿರ್ಧರಿಸಿದ್ದಾರೆ. ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ನವೀನ್ ಆಸೆ ಈಡೇರಲಿಲ್ಲ. ಕೊನೇ ಪಕ್ಷ ಆತನ ದೇಹ ಮೆಡಿಕಲ್ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ ಹೇಳಿದ್ದಾರೆ.