ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು, ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ

Mar 1, 2022, 7:27 PM IST

ಹಾವೇರಿ/ಬೆಂಗಳೂರು,(ಮಾ.01): ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ದಿನೇ ದಿನೇ ಮತ್ತಷ್ಟು ಉಗ್ರವಾಗುತ್ತಿದೆ. ಅಪಾರ ಸಾವು ನೋವು ಸಂಭವಿಸಿದ್ದರೂ ಈ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಮಂಗಳವಾರ, ಖಾರ್ಕಿವ್‌ನಲ್ಲಿ, ರಷ್ಯಾ ವಾಯುದಾಳಿ ನಡೆಸಿ, ಖಾರ್ಕಿವ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸಿದೆ. ಈ ವೇಳೆ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ, ಕರ್ನಾಟಕದ ಹಾವಚೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಬಲಿಯಾಗಿದ್ದಾರೆ.

Russia Ukraine war ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಪೋಷಕರಿಗೆ ಕರೆ ಮಾಡಿ ಪ್ರಧಾನಿ ಮೋದಿ ಸಾಂತ್ವನ!

ಹೌದು ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ಚಲಗೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಸಾವಿನ ಸುದ್ದಿ ಆತನ ಕುಟುಂಬಕ್ಕೆ ಆಘಾತ ಕೊಟ್ಟಿದೆ. ಇನ್ನು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.