Oct 10, 2024, 8:02 PM IST
ಬೆಂಗಳೂರು(ಅ.10) ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಸರಾ ವೈಭವ ಕಳೆಗಟ್ಟಿದೆ. ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಟರ್ಮಿನಲ್ ಒಳಗೆ ಹಾಗೂ ಹೊರಗೆ ದಸರಾ ವಿಶೇಷತೆಯ ಬೊಂಬೆಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಬಿಐಎಎಲ್ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿದೆ. ಡೊಳ್ಳು ಕುಣಿತ ವೀರಗಾಸೆ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮಗಳು ಮೇಳೈಸಿದೆ. ದೇಶ ವಿದೇಶದಿಂದ ಬರುವ ಪ್ರಯಾಣಿಕರಿಗೆ ದಸರಾ ವೈಭವ ತೋರಿಸಲು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.