ಮೈಸೂರು ಮೇಯರ್‌ ಚುನಾವಣೆ: ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಣ್ಣ ಪ್ಲ್ಯಾನೇ ಬೇರೆ!

Feb 24, 2021, 12:37 PM IST

ಮೈಸೂರು (ಫೆ. 24):  ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ಪಾಲಿಕೆ ಕೌನ್ಸಿಲ್ ಹಾಲ್‌ನಲ್ಲಿ ಆರಂಭಗೊಂಡಿದೆ.  ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮುಂದುವರೆಯುವುದು ಬಹುತೇಕ ನಿಶ್ಚಿತ ಎಂಬ ವಾತಾವರಣ ಇದೆ.

ಒಪ್ಪಂದಂತೆ ಈ ಬಾರಿ ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಅಧಿಕಾರ ಹಂಚಿಕೊಳ್ಳಲು ಜೆಡಿಎಸ್‌ ನಾಯಕರು ತೀರ್ಮಾನಿಸಿದಂತಿದೆ. ಆರಂಭದಲ್ಲಿ ಮೈತ್ರಿಯನ್ನೇ ಮುಂದುವರೆಸಿ, ಮಾತು ಉಳಿಸಿಕೊಳ್ಳಲು ಜೆಡಿಎಸ್‌ ನಾಯಕರು ತೀರ್ಮಾನಿಸಿದ್ದು, ಉಪ ಮೇಯರ್‌ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳಲು ಜೆಡಿಎಸ್‌ ಮುಂದಾಗಿದೆ. ಈವರೆಗೆ ಒಮ್ಮೆ ಕಾಂಗ್ರೆಸ್‌, ಮತ್ತೊಮ್ಮೆ ಜೆಡಿಎಸ್‌ನಂತೆ ಸರದಿಯಲ್ಲಿ ಮೇಯರ್‌ ಸ್ಥಾನವನ್ನು ಉಭಯ ಪಕ್ಷಗಳು ಹಂಚಿಕೊಂಡಿವೆ.

ಆಡಿಯೋ ಲೀಕ್ ವಿವಾದ : ಸೋಶಿಯಲ್ ಮೀಡಿಯಾದಲ್ಲೂ ಜಗ್ಗೇಶ್‌ಗೆ ತರಾಟೆ