Nov 9, 2024, 11:59 PM IST
ಬೆಂಗಳೂರು (ನ.9): ಮುಡಾ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೆಲವು ಕೇಸ್‌ನಲ್ಲಿ ಭೂಮಿ ವಶಕ್ಕೆ ಪಡೆದ 60 ವರ್ಷದ ಬಳಿಕ ಪರಿಹಾರ ನೀಡಲಾಗಿದೆ. ಹೈಕೋರ್ಟ್ ಅನುಮಾನ ಎಂದ ವ್ಯಕ್ತಿಗೆ 26 ಸೈಟ್ ಹಂಚಿಕೆ ಮಾಡಲಾಗಿದೆ.
ಮುಡಾ ಕೇಸ್‌ಗೆ ಪ್ರತ್ಯಸ್ತ್ರ ಎನ್ನುವಂತೆ ಬೈ ಎಲೆಕ್ಷನ್ ಹೊತ್ತಲ್ಲೇ ಕಾಂಗ್ರೆಸ್ ಕೋವಿಡ್ ಕೇಸ್ ಬೀಸಿದೆ. ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ಎಂದ ಜಸ್ಟೀಸ್ ಕುನ್ನಾ ವರದಿ ನೀಡಿತ್ತು. BSY, ರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲಾಗಿದೆ.
News Hour: ರಾಜ್ಯದ ಇತಿಹಾಸದಲ್ಲಿ ದಾಖಲೆ ಬರೆದ ಲೋಕಾಯುಕ್ತ
ಇದರ ನಡುವೆ, ವಕ್ಫ್ ಭೂತ ಕೊನೆಗೂ ಬೆಂಗಳೂರಿಗೆ ವಕ್ಕರಿಸಿದೆ. ಬೆಂಗಳೂರಿನ ಹೃದಯಭಾಗ ಅವೆನ್ಯೂ ರಸ್ತೆಯಲ್ಲಿ ತಮ್ಮ 172 ಎಕರೆ ಮೌಲ್ಯದ ಆಸ್ತಿ ಇದೆ ಎಂದು ವಕ್ಫ್ ಹೇಳಿದೆ.