ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಇಡಿ ಬಿಸಿ

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಇಡಿ ಬಿಸಿ

Published : Jan 28, 2025, 07:28 PM IST

ಮುಡಾ ಭೂ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ಜಾರಿ. ಇಡಿ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂತ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಈಗಾಗಲೇ ಲೋಕಾಯುಕ್ತ ಇಲಾಖೆಯಿಂದ ತನಿಖೆಯನ್ನು ಮುಗಿಸಿ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಅಧೀನದ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಿದೆ.

ಈ ಮೂಲಕ ಒಂದೊಂದೇ ಹೆಜ್ಜೆಯನ್ನಿಡುತ್ತಾ ತನಿಖೆ ಆರಂಭಿಸಿದ್ದ ಇ.ಡಿ ಇದೀಗ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಇಡಿ ನೋಟೀಸ್ ನೀಡಿತ್ತು. ಆದರೆ, ಇ.ಡಿ ನೋಟೀಸ್ ನೀಡಿದ ಬೆನ್ನಲ್ಲಿಯೇ ಇಬ್ಬರೂ ಎದ್ನೋ ಬಿದ್ನೋ ಅಂತಾ ಇ.ಡಿ ತನಿಖೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಇದೀಗ ಫೆ.10ರವರೆಗೆ ಜಾರಿ ನಿರ್ದೇಶನಾಲಯದ ತನಿಖೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಈ ಮೂಲಕ ಪಾರ್ವತಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more