ವೀಕೆಂಡ್ ಕರ್ಫ್ಯೂಗೆ (Weekend Curfew) ಬಿಜೆಪಿ ವಲಯದಲ್ಲೇ ವಿರೋಧ ಹೆಚ್ಚಾಗಿದೆ. ವೀಕೆಂಡ್ ಕರ್ಫ್ಯೂ ಬೇಡ ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಆಗ್ರಹಿಸಿದ್ದಾರೆ.
ಬೆಂಗಳೂರು (ಜ. 19): ವೀಕೆಂಡ್ ಕರ್ಫ್ಯೂಗೆ (Weekend Curfew) ಬಿಜೆಪಿ ವಲಯದಲ್ಲೇ ವಿರೋಧ ಹೆಚ್ಚಾಗಿದೆ. ವೀಕೆಂಡ್ ಕರ್ಫ್ಯೂ ಬೇಡ ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಆಗ್ರಹಿಸಿದ್ದಾರೆ.
'ನಮ್ಮ ರಾಜ್ಯದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೊಟ್ಟಾಗಿದೆ. ಈಗ ಬೂಸ್ಟರ್ ಡೋಸ್ ಬಂದಿದೆ. ಆಸ್ಪತ್ರೆಗಳಲ್ಲಿ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಇಷ್ಟಿದ್ದೂ ಲಾಕ್‌ಡೌನ್, ಕರ್ಫ್ಯೂ ಅಂತ ಹೆದರಿಸೋದಾದ್ರೆ ಲಸಿಕೆ ಯಾಕೆ ಬೇಕಿತ್ತು..? ಜನರಿಗೆ ಅನಗತ್ಯವಾಗಿ ಉಪದ್ರ ಕೊಡಬೇಡಿ. ವ್ಯಾಪಾರ, ವಹಿವಾಟಿಲ್ಲದೇ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅವರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಶುಕ್ರವಾರದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಿ, ಸಿಎಂ ಬೊಮ್ಮಾಯಿಯವರು ಸಂವೇದನಾಶೀಲ ಮುಖ್ಯಮಂತ್ರಿ, ಖಂಡಿತಾ ಅವರು ಜನರ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಿದ್ದಾರೆ' ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ವ್ಯಕ್ತಪಡಿಸಿದರು.