ದಿಶಾ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಸಿಇಒ ನಡುವೆ ಮಾತಿನ ಚಕಮಕಿ ನಡೆದಿದೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಹಾಜರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗರಂ ಆಗಿದ್ದಾರೆ.
ಮಂಡ್ಯ (ಆ. 18): ದಿಶಾ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಸಿಇಒ ನಡುವೆ ಮಾತಿನ ಚಕಮಕಿ ನಡೆದಿದೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಹಾಜರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗರಂ ಆಗಿದ್ದಾರೆ.
ಶ್ರೀನಿವಾಸ್ ಭಟ್ ಅವರು ನಡೆಸಿರುವ ಪತ್ರ ವ್ಯವಹಾರದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಆ ಪತ್ರ ವ್ಯವಹಾರ ಅಧಿಕೃತನಾ, ಅನಧಿಕೃತನಾ ಎಂದು ಸಮಜಾಯಿಷಿ ಬೇಕು. ನಾನು ಕೆಲವು ಬಾರಿ ಇದರ ಬಗ್ಗೆ ಪ್ರಶ್ನಿಸಿದಾಗ ನನಗೆ ಉತ್ತರ ಬಂದಿಲ್ಲ. ದಿಶಾ ಸಭೆಯಲ್ಲಿರುವ ಶ್ರೀನಿವಾಸ್ ಭಟ್ ಸುಮಲತಾರ ಆಪ್ತ ಕಾರ್ಯದರ್ಶಿನಾ.? ಅವರ್ಯಾರು..? ಉತ್ತರಿಸಬೇಕು ಎಂದು ಸಭೆಯಲ್ಲಿ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು. ಆಗ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.