ಸುನೀಲ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನನ್ನನ್ನು ಅಭಿನಂದಿಸಲು ಬರುವವರು ಹಾರ, ತುರಾಯಿ ತರಬೇಡಿ. ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದು ಮನವಿ ಮಾಡಿದ್ದರು. ಸಚಿವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು (ಆ. 14): ಸುನೀಲ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನನ್ನನ್ನು ಅಭಿನಂದಿಸಲು ಬರುವವರು ಹಾರ, ತುರಾಯಿ ತರಬೇಡಿ. ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದು ಮನವಿ ಮಾಡಿದ್ದರು. ಸಚಿವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸುನೀಲ್ ಕುಮಾರ್ ಅವರನ್ನು ಅಭಿನಂದಿಸಲು ಬಂದ ಕಾರ್ಯಕರ್ತರು, ಅಭಿಮಾನಿಗಳಿಂದ 600 ಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾಗಿದೆ. ಕಾದಂಬರಿ, ಪ್ರಬಂಧ, ಡಿಕ್ಷನರಿ, ಸೇರಿ 600 ಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾಗಿದೆ. ಇವುಗಳನ್ನು ಕಾರ್ಕಳ ಗ್ರಂಥಾಲಯಕ್ಕೆ ನೀಡಲಿದ್ದಾರೆ.