Sep 8, 2021, 5:09 PM IST
ಬೆಂಗಳೂರು (ಸೆ. 08): ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್‌ರಿಗೆ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವರಾಗುವ ಸೌಭಾಗ್ಯ ಒದಗಿ ಬಂತು. ದಕ್ಷತೆ, ಪ್ರಾಮಾಣಿಕತೆ ಹಾಗೂ ಕಾರ್ಮಿಕ ಇಲಾಖೆಗೆ ಶಿವರಾಮ್ ಹೆಬ್ಬಾರರು ಕೊಟ್ಟ ಸ್ಪರ್ಶದಿಂದ ಎರಡನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಒದಗಿ ಬಂತು.
ಹಕ್ಕಿ ಪಿಕ್ಕಿ ಜನಾಂಗದವರಿಗೆ ಹೈ ಫೈ ಲೇಔಟ್, ಹೊಸದುರ್ಗವನ್ನು ಮಾದರಿ ಕ್ಷೇತ್ರ ಮಾಡಲು ಹೊರಟ ಗೂಳಿಹಟ್ಟಿ
ದುಡಿಯುವ ವರ್ಗದ ರಕ್ಷಣೆ ನಮ್ಮ ಆದ್ಯತೆ ಎಂದು ಇಲಾಖೆ ಪ್ರವೇಶಿಸಿದ ಹೆಬ್ಬಾರರು, ಕೋವಿಡ್ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಂತರು. ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫುಡ್ ಕಿಟ್ ವಿತರಿಸಿದ್ದಾರೆ. ಇಲ್ಲಿಯವರೆಗೆ 89 ಲಕ್ಷಕ್ಕೂ ಹೆಚ್ಚು ಆಹಾರ ಪ್ಯಾಕೇಜ್ ವಿತರಿಸಿದ್ದಾರೆ. ಇನ್ನು ಕೊರೋನಾ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ, ಅಹಾರ, ಮಾಸ್ಕ್, ಸ್ಯಾನಿಟೈಸರ್ ನೀಡಿ ಸುರಕ್ಷಿತವಾಗಿ ಊರು ತಲುಪಿಸಲಾಯ್ತು. ಇನ್ನು ಕಟ್ಟಡ ಕಾರ್ಮಿಕರ ಸಹಾಯಧನವನ್ನು 5 ಸಾವಿರಕ್ಕೇರಿಸಲಾಯಿತು. ಕೊರೋನಾ ಕಾಲದಲ್ಲಿ ಕಾರ್ಮಿಕ ಇಲಾಖೆಯ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ಇಲ್ಲಿದೆ ಒಂದು ವರದಿ.