Jul 7, 2020, 11:47 AM IST
ಬೆಂಗಳೂರು (ಜು. 07): 'ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಇನ್ನೂ ನಾಲ್ಕೈದು ತಿಂಗಳು ಇದೇ ರೀತಿ ಇರುತ್ತದೆ. ಇದನ್ನು ನಿಭಾಯಿಸುವ ಅನಿವಾರ್ಯವಿದೆ. ಇದು ಒಂದೆರಡು ದಿನಗಳಲ್ಲಿ ಮುಗಿದು ಹೋಗುವುದಿಲ್ಲ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಇನ್ನಷ್ಟು ಸೋಂಕು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಗೆ ನಾವು ಸಿದ್ಧರಾಗಬೇಕಿದೆ. ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ನಮ್ಮೊಂದಿಗೆ ಕೈ ಜೋಡಿಸಲು ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
11 ಕೋಟಿ ಬಜೆಟ್ ಮಂಡಿಸಿಯೂ ಆ್ಯಂಬುಲೆನ್ಸ್ ಖರೀದಿಸಲು ಬಿಬಿಎಂಪಿ ಬಳಿ ಹಣವಿಲ್ವಾ?