ಮೇಕೆದಾಟು ಅಣೆಕಟ್ಟಿಗಾಗಿ (Mekedatu Dam) ಆಗ್ರಹಿಸಿ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ. ದೊಡ್ಡ ಆಲದಹಳ್ಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ
ಬೆಂಗಳೂರು (ಜ. 10): ಮೇಕೆದಾಟು ಅಣೆಕಟ್ಟಿಗಾಗಿ (Mekedatu Dam) ಆಗ್ರಹಿಸಿ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ. ದೊಡ್ಡ ಆಲದಹಳ್ಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ನಿಯಮವನ್ನು ಪಾಲಿಸುವುದು, ಜನರ ಹಿತದೃಷ್ಟಿಯನ್ನು ಕಾಯ್ದುಕೊಳ್ಳುವುದು ವಿಪಕ್ಷಗಳ ಜವಾಬ್ದಾರಿಯೂ ಹೌದು. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿವೆ. ರಾಜ್ಯದ ಜನರ ಹಿತವನ್ನು ಬಲಿಕೊಟ್ಟು ಪಾದಯಾತ್ರೆ ನಡೆಸಿದ್ದಾರೆ. ಕೋವಿಡ್ ಟೆಸ್ಟ್‌ಗೆ ಹೋದ ಸಿಬ್ಬಂದಿಗಳು, ಅಧಿಕಾರಿಗಳನ್ನು ನಿಂದಿಸಿ ಕಳುಹಿಸಿದ್ಧಾರೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.