Apr 20, 2022, 3:31 PM IST
ಬೆಂಗಳೂರು(ಏ.20): ದೇಶ, ರಾಜ್ಯದಲ್ಲಿ ಕಳೆದ ಕೆಲ ಸಮಯದಿಂದ ಕೋಮು ಸಂಬಂಧಿ ಗಲಭೆಗಳು ಭಾರೀ ಸದ್ದು ಮಾಡುತ್ತಿವೆ. ಹೀಗಿರುವಾಗ ಈ ಸಂಬಂಧ ಧರ್ಮಾಧರಿತ ಸಂಘಟನೆ ನಿರ್ಬಂಧಿಸುವ ಬಗ್ಗೆಯೂ ಮಾತು ಕೇಳಿ ಬರುತ್ತಿವೆ. ಸದ್ಯ ರಾಜ್ಯದ ಹಿಂದೂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕೆಪಿಸಿಸಿಪ್ರಚಾರ ಸಮಿತಿ ಅಧ್ಯಕ್ಷ ಇಂತಹುದ್ದೊಂದು ಆಗ್ರಹ ಮಾಡಿದ್ದಾರೆ.
ಹೌದು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳವನ್ನೂ ನಿಷೇಧಿಸಿ. ಪಿಎಫ್‌ಐ, ಎಸ್‌ಡಿಪಿಐ ಜೊತೆಗೆ ಸನಾತನ ಧರ್ಮ ಸಂಘಟನೆಯನ್ನೂ ನಿಷೇಧಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೋಮುಭಾವನೆ ಕೆರಳಿಸುವ ಸಂಘಟನೆಯ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದಿದ್ದಾರೆ.