Jun 2, 2020, 12:21 PM IST
ಬೆಂಗಳೂರು(ಜೂ.02): ನಿರೀಕ್ಷೆಯಂತೆಯೇ ಜೂನ್ 01ರಂದು ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಿವೆ. ಇನ್ನು ನಮ್ಮ ರಾಜ್ಯಕ್ಕೆ ಇಂದು(ಜೂ.02) ಅಥವಾ ನಾಳೆ(ಜೂ.03)ಕ್ಕೆ ಮಾನ್ಸೂನ್ ಮಳೆ ಆರಂಭವಾಗುವ ಸಾಧ್ಯತೆಯಿದೆ.
ಕೇರಳದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸಲಾರಂಭಿಸಿದ್ದು, ರಾಜ್ಯದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಲಡಾಖ್ ಗಡಿ ಬಳಿ ಚೀನಾ ಯುದ್ಧವಿಮಾನ ಹಾರಾಟ; ಗಡಿಯಲ್ಲಿ ಭಾರತದಿಂದ ತೀವ್ರ ನಿಗಾ
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಮಳೆ ಆರಂಭವಾಗಿದ್ದು ನದಿ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ಮೇಲೆ ಛತ್ರಿ, ರೈನ್ ಕೋಟ್ ರೆಡಿಮಾಡಿಟ್ಟುಕೊಳ್ಳುವುದು ಒಳಿತು. ನಿಗದಿತ ಸಮಯದಲ್ಲೇ ಮುಂಗಾರು ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.