Jul 4, 2024, 11:58 AM IST
ಬೆಂಗಳೂರು (ಜು.04): ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲುಗಾಡಿಸ್ತಾ ಇರೋ ಬ್ರಹ್ಮಾಂಡ ಭ್ರಷ್ಟಾಚಾರ. ಇದು 187 ಕೋಟಿಯ ರೂಪಾಯಿ ಅಕ್ರಮದ ನಾಗರಹಸ್ಯ.. ಆ ರಹಸ್ಯವನ್ನು ಬೆನ್ನತ್ತಿ ಹೊರಟ ಸುವರ್ಣ ನ್ಯೂಸ್'ಗೆ ಸಿಕ್ಕಿದೆ ಸ್ಫೋಟಕ ಸುದ್ದಿ. ಮಹಾ ಭ್ರಷ್ಟಾಚಾರದಲ್ಲಿ ಸಚಿವನೇ ಸೂತ್ರಧಾರ, ಅಧಿಕಾರಿಗಳೇ ಪಾತ್ರಧಾರರು.. ಅಷ್ಟಕ್ಕೂ ಸರ್ಕಾರದ ದುಡ್ಡು ದಂಧೆಕೋರರ ಪಾಲಾಗಿದ್ದು ಹೇಗೆ..? ಅರೆಸ್ಟ್ ಆಗಿರೋ ಆರೋಪಿಗಳು ಎಸ್.ಐ.ಟಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದೇನು..? 187 ಕೋಟಿ ರೂಪಾಯಿಯ ‘ನಾಗ’ರಹಸ್ಯದ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.
ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸ್ತಾ ಇರೋದ್ಯಾಕೆ..? ಸಿಎಂ ಅಧೀನದಲ್ಲಿರೋ ಹಣಕಾಸು ಇಲಾಖೆಯಿಂದಲೇ ಹಣ ವರ್ಗಾವಣೆಯಾಗಿರೋದು ಸಿಎಂಗೆ ಸಂಕಷ್ಟ ತಂದಿಡಲಿದ್ಯಾ..? ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸ್ತಾ ಇದೆ. ಸಿಎಂ ಕಚೇರಿಗೆ ಮುತ್ತಿಗೆ ಹಾಕೋ ಪ್ರಯತ್ನವನ್ನೂ ಮಾಡಿದೆ. ಅಷ್ಟಕ್ಕೂ ಪ್ರಕರಣದಲ್ಲಿ ಸಿಎಂ ವಿರುದ್ಧ ಕೇಸರಿ ಕಲಿಗಳು ಮುಗಿ ಬಿದ್ದಿರೋದು ಯಾಕೆ ಗೊತ್ತಾ..? ಬ್ರೇಕ್ ಆ್ಯಂಕರ್2: ಒಂದ್ಕಡೆ ಎಸ್ಐಟಿ ತನಿಖೆ, ಮತ್ತೊಂದ್ಕಡೆ ಸಿಬಿಐ ತನಿಖೆ.. ಹಾಗಾದ್ರೆ ಮಾಜಿ ಸಚಿವ ನಾಗೇಂದ್ರ ಸಹಿತ ಅಕ್ರಮದಲ್ಲಿ ಭಾಗಿಯಾದವರಿಗೆ ಸಂಕಷ್ಟ ಗ್ಯಾರಂಟಿನಾ..? ಸಿಬಿಐ ಎಂಟ್ರಿಯೊಂದಿಗೆ ದೊಡ್ಡ ದೊಡ್ಡ ತಿಮಿಂಗಿಗಳೇ ಬಲೆಗೆ ಬೀಳೋದು ಫಿಕ್ಸಾ..? ಎನ್ನುವುದು ಶಿಘ್ರವೇ ತಿಳಿಯಲಿದೆ.
ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೋಮ್ಯಾನ್ಸ್!
ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಮತ್ತೊಂದ್ಕಡೆ ಬ್ಯಾಂಕ್ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಯೂನಿಯನ್ ಬ್ಯಾಂಕ್ ಪತ್ರ ಬರೆದಿದೆ. ಹಾಗಾದ್ರೆ ಮಾಜಿ ಸಚಿವ ನಾಗೇಂದ್ರ ಸಹಿತ ಅಕ್ರಮದಲ್ಲಿ ಭಾಗಿಯಾದವರಿಗೆ ಸಂಕಷ್ಟ ಗ್ಯಾರಂಟಿನಾ..? ಸಿಬಿಐ ಎಂಟ್ರಿಯೊಂದಿಗೆ ದೊಡ್ಡ ದೊಡ್ಡ ತಿಮಿಂಗಿಗಳೇ ಬಲೆಗೆ ಬೀಳೋದು ಫಿಕ್ಸಾ..? ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು.