ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ ಮನವೊಲಿಕೆಗೆ ಮುಂದಾದರು. ಆದ್ರೆ, ಇದ್ಯಾವುದಕ್ಕೂ ರೈತರು ಜಗ್ಗಲಿಲ್ಲ. ಇದ್ರಿಂದ ಕಾರಜೋಳ ಅವರು ಬಂದ ದಾರಿ ಸುಂಕವಿಲ್ಲ ಎಂಬಂತೆ ವಾಪಸ್ ನಡೆದರು.
ಬೆಂಗಳೂರು, (ಅ.19): ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ ಮನವೊಲಿಕೆಗೆ ಮುಂದಾದರು.
ಮೂರನೇ ದಿನಕ್ಕೆ ಕಾಲಿಟ್ಟ ಮಹದಾಯಿ ಕಿಚ್ಚು; ಸರ್ಕಾರಕ್ಕೆ ರೈತರಿಂದ ಎಚ್ಚರಿಕೆ!
ಆದ್ರೆ, ಅದೇ ಗೊಳ್ಳು ಮಾತುಗಳನ್ನಾಡಲು ಮುಂದಾದ ಕಾರಜೋಳಗೆ ರೈತರು ಜಗ್ಗಲಿಲ್ಲ. ಇದ್ರಿಂದ ಕಾರಜೋಳ ಅವರು ಬಂದ ದಾರಿ ಸುಂಕವಿಲ್ಲ ಎಂಬಂತೆ ವಾಪಸ್ ನಡೆದರು.
ಕಳೆದ ಎರಡು ದಿನಗಳಿಂದ ಮಳೆ, ಚಳಿ ಎನ್ನದೇ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಪಾಲರ ಭೇಟಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇದವರೆಗೂ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ.