Budget 2022: ಮಹದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿ: ಡಿ ಕೆ ಸುರೇಶ್

Feb 1, 2022, 11:18 AM IST

ಬೆಂಗಳೂರು (ಫೆ. 01): ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟು ನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್‌ ಇಂದು ಮಂಡನೆಯಾಗಲಿದೆ.

'ಕರ್ನಾಟಕಕ್ಕೆ ಸಂಬಂಧಿಸಿದಂತೆ, ಮಹದಾಯಿ ಯೋಜನೆಯನ್ನು (Mahadayi Project) ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. 6 ಮೆಡಿಕಲ್ ಕಾಲೇಜು ಘೋಷಣೆಯಾಗುವ ನಿರೀಕ್ಷೆ ಇದೆ. ಅಭಿವೃದ್ಧಿಗೆ ಹಣ ಬರಬೇಕು, ಜಿಎಸ್‌ಟಿ ಕಡಿಮೆ ಮಾಡಬೇಕು ಎನ್ನುವ ನಿರೀಕ್ಷೆ ಇದೆ' ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. 

'MSP ಬಿಲ್‌ನ್ನು ತರಬೇಕು ಎಂಬುದು ನಮ್ಮ ದೊಡ್ಡ ನಿರೀಕ್ಷೆ. ಕೃಷಿ ಅಭಿವೃದ್ಧಿ ಯೋಜನೆಯನ್ನು ಘೋಷಿಸಬೇಕೆಂದು ಒತ್ತಾಯಿಸುತ್ತೇವೆ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.