ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುತ್ತೆ..?

Apr 27, 2020, 6:38 PM IST

ಬೆಂಗಳೂರು(ಏ.27): ಕೊರೋನಾ ವೈರಸ್ ಹಾವಳಿಗೆ ಇಡೀ ದೇಶವೇ ನಲುಗಿ ಹೋಗಿದೆ. ಇದಕ್ಕೆ ಕರ್ನಾಟಕ ಕೂಡಾ ಹೊರತಾಗಿಲ್ಲ. ಈಗಾಗಲೇ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು ಮೇ 03ಕ್ಕೆ ಕೊನೆಯಾಗಲಿದೆ. ಆದರೆ ಆ ಬಳಿಕ ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಹೌದು, ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು. ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿ ಬಳಿ ಲಾಕ್‌ಡೌನ್ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಕರ್ನಾಟಕದ 10 ರೆಡ್‌ ಝೋನ್ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ. 

"

ರೆಡ್‌ ಝೋನ್‌ನಲ್ಲಿ ಲಾಕ್‌ಡೌನ್ ಫಿಕ್ಸ್.! ಆರೆಂಜ್, ಗ್ರೀನ್ ಝೋನ್ ಕಥೆ ಏನು?

15ಕ್ಕೂ ಹೆಚ್ಚು ಕೊರೋನಾ ಕೇಸ್‌ಗಳಿರುವ ಜಿಲ್ಲೆಗಳು ಕಂಪ್ಲೀಟ್ ಲಾಕ್‌ ಆಗಲಿದೆ. ಯಾವ ಜಿಲ್ಲೆಗಳು ರೆಡ್‌ ಝೋನ್‌ನಲ್ಲಿವೆ. ಇನ್ನುಳಿದ ಆರೆಂಜ್‌ ಝೋನ್ ಹಾಗೂ ಗ್ರೀನ್ ಝೋನ್‌ಗಳಲ್ಲಿ ಯಾವುದಕ್ಕೆಲ್ಲಾ ವಿನಾಯ್ತಿ ಸಿಗಬಹುದು. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.