May 20, 2020, 11:33 AM IST
ಬೆಂಗಳೂರು(ಮೇ.20): ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ BMTC ಹಾಗೂ KSRTC ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಿದ್ದು ನಗರದಲ್ಲಿ ಕೊರೋನಾ ಭೀತಿಯಿಂದಾಗಿ ಬೆಂಗಳೂರು ನಗರ ಸಾರಿಗೆ ಬಸ್ ಹತ್ತಲು ಜನ ಹಿಂದೇಟು ಹಾಕುತ್ತಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತ್ತಿದೆ. ಬಸ್‌ಗಳು ಸಾಲಾಗಿ ನಿಂತಿದ್ದರೂ ಸಹಾ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ಕೊರೋನಾ ಭಯ ಅವರನ್ನು ಕಾಡುತ್ತಿದೆ.
ದಾವಣಗೆರೆ ನಗರದಲ್ಲಿ ಒಂದೇ ದಿನ 22 ಕೇಸ್!
ಇನ್ನು ಮತ್ತೊಂದೆಡೆ ಬೆಂಗಳೂರಿನಿಂದ ತಮ್ಮ ಜಿಲ್ಲೆಗಳಿಗೆ ತೆರಳಲು ನಾ ಮುಂದು, ತಾ ಮುಂದು ಎಂಬಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಬಸ್ ನಿಲ್ದಾಣದತ್ತ ಬರಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.