Apr 25, 2020, 12:39 PM IST
ಬೆಂಗಳೂರು (ಏ. 25): ರಾಜ್ಯದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಒಪ್ಪಂದದ ಮೇರೆಗೆ ಬಸ್ ಸಂಚಾರಕ್ಕೆ KSRTC ಸಜ್ಜಾಗಿದೆ. ಅಗತ್ಯ ಸೇವೆಗಳಿಗೆ ಬಸ್ ಸೇವೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ಒಪ್ಪಿಕೊಂಡಿದೆ. ಪ್ರತಿ ಕಿಮೀಗೆ 40 ರೂ, 12ಗಂಟೆ ಅವಧಿಗೆ 8 ಸಾವಿರ ರೂ ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ 10 ಸಾವಿರ ರೂ ನಿಗದಿಪಡಿಸಲಾಗಿದೆ. KSRTC ಬಸ್‌ನಲ್ಲಿ 20 ಅಥವಾ 30 ಮಂದಿಗೆ ಅವಕಾಶ ನೀಡಲಾಗಿದೆ. ರಾಜಹಂಸ ಬಸ್‌ನಲ್ಲಿ 16 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಷರತ್ತುಗಳ ಅನ್ವಯ ಬಾಡಿಗೆ ನೀಡಲು KSRTC ನಿರ್ಧರಿಸಿದೆ.
ಲಾಕ್‌ಡೌನ್ ಸಡಿಲ: ಬಸ್ಗಳ ಮೂಲಕ ಸ್ವಂತ ಸ್ಥಳಗಳಿಗೆ ತೆರಳಿದ ವಲಸೆ ಕಾರ್ಮಿಕರು