ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಮುಷ್ಕರವನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಕೋಡಿಹಳ್ಳಿ ವಿರುದ್ಧ ಸಾರಿಗೆ ಸಚಿವ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ. 14): ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಮುಷ್ಕರವನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಸಾರಿಗೆ ಸಮರಕ್ಕೆ ಕೋಡಿಹಳ್ಳಿ ಎಂಟ್ರಿ ಬಗ್ಗೆ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಡಿಹಳ್ಳಿ ವಿರುದ್ಧ ಸಾರಿಗೆ ಸಚಿವ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೂ ನಮಗೂ ಸಂಬಂಧ ಇಲ್ಲ. ನಾವು ನಮ್ಮ ನೌಕರರ ಜೊತೆ ಸಂಧಾನ ಮಾಡಿದ್ದೇವೆ. ಮಾತುಕತೆ ನಡೆಸಿದ್ದೇವೆ. ಯಾರ ಮಾತಿಗೂ ಕಿವಿಗೊಡುವ ಅಗತ್ಯ ಇಲ್ಲ. ಸರ್ಕಾರ ನಿಮ್ಮ ಹಿತಾಸಕ್ತಿಯನ್ನು ಕಾಪಾಡುತ್ತದೆ. ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಕೆಲಸ ಪ್ರಾರಂಭಿಸಿ' ಎಂದು ಸವದಿ ಮನವಿ ಮಾಡಿಕೊಂಡಿದ್ದಾರೆ.