ದಿನಬಳಕೆಯ ವಿವಿಧ ವಸ್ತುಗಳು ಮತ್ತು ಹಲವು ಸೇವೆಗಳ ಮೇಲಿನ ಜಿಎಸ್‌ಟಿ ತೆರಿಗೆ ದರ ಹೆಚ್ಚಿಸುವ ಜಿಎಸ್‌ಟಿ ಮಂಡಳಿಯ ನಿರ್ಧಾರ ಜು.18ರ ಸೋಮವಾರದಿಂದ ಜಾರಿಗೆ ಬರಲಿದೆ.
ದಿನ ಬಳಕೆಯ ವಿವಿಧ ವಸ್ತುಗಳು ಮತ್ತು ಹಲವು ಸೇವೆಗಳ ಮೇಲಿನ ಜಿಎಸ್‌ಟಿ ತೆರಿಗೆ ದರ ಹೆಚ್ಚಿಸುವ ಜಿಎಸ್‌ಟಿ ಮಂಡಳಿಯ ನಿರ್ಧಾರ ಜು.18ರ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ಮತ್ತೊಂದು ಸುತ್ತಿನಲ್ಲಿ ಜೇಬು ಸುಡುವುದು ಖಚಿತವಾಗಿದೆ. ಕೆಎಂಎಫ್‌ನಿಮದಲೂ ಹೊಸದರದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಲಿನ ದರ ಹೊರತುಪಡಿಸಿ ಕೆಎಂಎಫ್ ನ ಅನೇಕ ಉತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಅಂದರೆ 2-3 ರೂ ಹೆಚ್ಚಳವಾಗಲಿದೆ.
ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಕೋಕೋಪೀಟ್‌ಗೆ ಇನ್ನು ಶೇ.5ರಷ್ಟುತೆರಿಗೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಇವೆಲ್ಲಾ ದುಬಾರಿಯಾಗಲಿದೆ.