- ಕೇರಳದಲ್ಲಿ ಕೋವಿಡ್ ಸೋಂಕಿನ ಅಬ್ಬರ
- ರಾಜ್ಯದಲ್ಲಿ ನಿನ್ನೆ 1875 ಪ್ರಕರಣ, 25 ಜನ ಸಾವು..!
- ದಕ್ಷಿಣ ಕನ್ನಡದಲ್ಲಿ 410 ಮಂದಿಯಲ್ಲಿ ಕೋವಿಡ್ ದೃಢ
ಮಂಗಳೂರು (ಆ. 02): ಕೇರಳದಲ್ಲಿ ಕೋವಿಡ್ ಸೋಂಕಿನ ಅಬ್ಬರ ಮುಂದುವರೆಯುತ್ತಿದ್ದಂತೆ, ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ದೊಡ್ಡ ಮಟ್ಟದಲ್ಲಿ ಸೋಂಕು ಪತ್ತೆಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 410 ಮಂದಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದ್ದರೆ ಬೆಂಗಳೂರಿನಲ್ಲಿ 409 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಗಡಿಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದ್ದು, ಸ್ವ್ಯಾಬ್ ಕೊಟ್ಟು 48 ಗಂಟೆ ಬಳಿಕ ರಿಪೋರ್ಟ್ ಬರುತ್ತದೆ. ಅಲ್ಲಿಯವರೆಗೆ ಬೇಕಾಬಿಟ್ಟಿ ಓಡಾಡುವುದರಿಂದ ಸೋಂಕು ಹೆಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸೋಂಕು ಇನ್ನಷ್ಟು ಉಲ್ಭಣವಾಗುವುದರಲ್ಲಿ ಅನುಮಾನವೇ ಇಲ್ಲ.