Nov 5, 2022, 4:48 PM IST
ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲು ನವೆಂಬರ್ 11ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಆಗಮಿಸುವ ಮೋದಿಗೆ ತೊಡಿಸಲು ಮೈಸೂರು ಪೇಟ ರೆಡಿಯಾಗಿದೆ. ಕೆಂಪೇಗೌಡ ಪ್ರತಿಯಲ್ಲಿ ಇರುವಂತೆಯೇ ಪೇಟವನ್ನು ಹತ್ತು ದಿನಗಳ ಶ್ರಮಪಟ್ಟು ಸಿದ್ದಪಡಿಸಿದ್ದಾರೆ. ಮೈಸೂರಿನ ಕಲಾವಿದ ನಂದನ್. ಇದೇ ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ ಮಾಡಲಾಗಿದ್ದು, ಬೆಂಗಳೂರಿಗೆ ಆಗಮಿಸುವ ಮೋದಿಗೆ ತೊಡಿಸಲು ಮೈಸೂರು ಪೇಟ ರೆಡಿಯಾಗಿದೆ. ಕೆಂಪೇಗೌಡ ಪ್ರತಿಮೆಯಲ್ಲಿ ಇರುವಂತೆಯೇ ಪೇಟ ಸಿದ್ದವಾಗಿದೆ. ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಹಾಗೂ ಕೆಂಪೇಗೌಡ ಅಭಿಮಾನಿ ಬಳಗದಿಂದ ಕೆಂಪೇಗೌಡ ಪೇಟ ತಯಾರು ಮಾಡಲಾಗಿದ್ದು, ಇದು ಬನಾರಸ್ ರೇಷ್ಮೆ, ರೆಷ್ಮೇ, ಗರಿ, ಮುತ್ತುಗಳು ಸೇರಿ ಕುಸುರಿ ಕೆಲಸದಿಂದ ಕಂಗೊಳಿಸುತ್ತಿದೆ. ಆದಿ ಚುಂಚನಗಿರಿ ಜಗದ್ಗುರು ನಿರ್ಮಲಾನಂದನಾಥ ಸ್ತಾಮೀಜಿ ಅನುಮತಿ ಪಡೆದು ಇದನ್ನು ತಯಾರಿಸಲಾಗಿದೆ.