ಖಾಸಗಿ ಶಾಲೆಯಲ್ಲಿ ನಾಡಗೀತ ಕಡ್ಡಾಯವಿಲ್ಲ, ಆಕ್ರೋಶದ ಬಳಿಕ ಆದೇಶ ಬದಲಿಸಿದ ಸರ್ಕಾರ, ಪುಟ್ಟಣ್ಣ ಪ್ರಮಾಣವಚನ ಬಳಿಕ ಬಿಜೆಪಿ ಕಾಲೆಳೆದ ಸಿದ್ದರಾಮಯ್ಯ, ರಾಮನಗರ ವಕೀಲರ ಹೋರಾಟ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ನಾಡಗೀತೆ ಹಾಡು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಲ್ಲ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಅಫಿಡವಿತ್ ಸಲ್ಲಿಸಿತ್ತು. ಈ ವಿವಾದ ಜೋರಾಗುತ್ತಿದ್ದಂತೆ ಆದೇಶ ಬದಲಿಸಿದೆ. ಇದು ಪ್ರಿಂಟಿಂಗ್ ಮಿಸ್ಟೇಕ್ ಎಂದು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ಇಷ್ಟೇ ಅಲ್ಲ ಈ ಆದೇಶವನ್ನೂ ಬದಲಿಸುವುದಾಗಿ ಹೇಳಿದ್ದಾರೆ.