Karnataka Rain Updates: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

May 21, 2022, 9:13 PM IST

ಬೆಂಗಳೂರು (ಮೇ 21): ಸತತ ಮಳೆಯಿಂದಾಗಿ ರಾಜ್ಯದ (Karnataka Rain) ಕೆಲ ಜಿಲ್ಲೆಗಳು ತತ್ತರಿಸುತ್ತಿವೆ. ಒಂದು ಕಡೆ ಬೆಳೆ ಬೆಳೆ ಹಾಳಾಗುತ್ತಿದ್ದರೆ ಮತ್ತೊಂದೆಡೆ ದಿನದಿಂದ ದಿನಕ್ಕೆ ಜನ ಜೀವನ ಕಷ್ಟದಲ್ಲಿ ತೇಳುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಇಲ್ಲಿವರೆಗು ಸುರಿದಿದ್ದು ಮತ್ತು ಈಗ ಸುರಿಯುತ್ತಿರೋದು ಕೇವಲ ಮಾಯದಂತ ಮಳೆಯಲ್ಲ, ಇದು ಮಾಯಾವಿ ಮಳೆ, ಮಹಾ ಪರ್ವತ ಮಳೆ. ಮಳೆಗಾಲದ ಆರಂಭದಲ್ಲೇ ಬರದ ನಾಡು ಮಲೆನಾಡಿನಂತಾಗಿದೆ. ಉತ್ತರ ಕರ್ನಾಟಕದ ಹಾವೇರಿ, ಹುಬ್ಬಳ್ಳಿ, ಗದಗ, ಚಿತ್ರದುರ್ಗ ಮತ್ತು ಬಾಗಲಕೋಟೆ ಸೇರಿದಂತೆ ಇನ್ನು ಕೆಲ ಜಿಲ್ಲೆಗಳಲ್ಲಿ ಮಳೆ ನಿರಂತರ ಸುರಿಯುತ್ತಿದೆ.

ಇದನ್ನೂ ನೋಡಿ: ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ಮುಳುಗಿದ ಈಶಾನ್ಯ ರಾಜ್ಯಗಳು..!

ಮೂರ್ನಾಲ್ಕು ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ, ಬರ ಪ್ರದೇಶವೀಗ ಅಕ್ಷರಶ ಮಲೆನಾಡಿನಂತಾಗಿವೆ. ಕೆರೆ ಕಟ್ಟೆಗಳು ಒಡೆದು, ಜಲಪಾತದಂತೆ ಹರಿಯುತ್ತಿವೆ. ಹಳ್ಳಿಗೆ ಹಳ್ಳಿಗಳೇ ಮುಳುಗಿ, ತೇಳುತ್ತಿವೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಬೆಳೆಗಳು ಕೊಚ್ಚಿಹೋಗಿವೆ. ಅದೆಷ್ಟೋ ಜನರು ಸೂರಿಲ್ಲದೆ ಪರದಾಡುವಂತಾಗಿದೆ.  ಸತತ ಸುರಿದ ಅಬ್ಬರದ ಮಳೆಗೆ ರಾಜ್ಯದ ಯಾವೆಲ್ಲ ಜಿಲ್ಲೆಯ ಜನ ಹೇಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ ಅನ್ನೋದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ