ಸಚಿವ ಶ್ರೀರಾಮುಲು ಕೂಡಾ ದಿಢೀರ್ ದೆಹಲಿಗೆ ಭೇಟಿ ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ದೆಹಲಿ ಭೇಟಿ ಪರ್ವ ಶುರುವಾಗಿದೆ. ಉಸ್ತುವಾರಿ ಅರುಣ್ ಸಿಂಗ್ ಸೂಚನೆಯಂತೆ ದಿಢೀರ್ ದೆಹಲಿಗೆ ತೆರಳಿದ್ದಾರೆ ಶ್ರೀರಾಮುಲು.
ಬೆಂಗಳೂರು (ಜು. 21): ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಒಂದು ಕಡೆಯಾದರೆ, ಇನ್ನೊಂದು ಕಡೆ ದೆಹಲಿಯಲ್ಲೂ ರಾಜಕೀಯ ಶುರುವಾಗಿದೆ. ಶಾಸಕ ರೇಣುಕಾಚಾರ್ಯ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಸಚಿವ ಶ್ರೀರಾಮುಲು ಕೂಡಾ ದಿಢೀರ್ ದೆಹಲಿಗೆ ಭೇಟಿ ನೀಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ದೆಹಲಿ ಭೇಟಿ ಪರ್ವ ಶುರುವಾಗಿದೆ. ಉಸ್ತುವಾರಿ ಅರುಣ್ ಸಿಂಗ್ ಸೂಚನೆಯಂತೆ ದಿಢೀರ್ ದೆಹಲಿಗೆ ತೆರಳಿದ್ದಾರೆ ಶ್ರೀರಾಮುಲು. ರಾಜ್ಯ ರಾಜಕೀಯದ ಬೆಳವಣಿಗೆಗೂ, ಸಚಿವರ ದೆಹಲಿ ಭೇಟಿಗೂ ತಾಳೆಯಾದಂತೆ ಭಾಸವಾಗುತ್ತಿರುವುದು ಸುಳ್ಳಲ್ಲ.